ಓಡುವ ನದಿ
ಬಂಗಾರದ ಹೂವು ಪಿ. ಬಿ. ಶ್ರೀನಿವಾಸ್, ಪಿ. ಸುಶೀಲ
ಚಿ. ಉದಯಶಂಕರ್
ರಾಜನ್ ನಾಗೇಂದ್ರ
ಓಡುವ ನದಿ ಸಾಗರವ ಸೇರಲೆಬೇಕು
ನಾನು ನೀನು ಎಂದಾದರು ಸೇರಲೆ ಬೇಕು
ಸೇರಿ ಬಾಳಲೆ ಬೇಕು ಬಾಳು ಬೆಳಗಲೆ ಬೇಕು
ಹೃದಯ ಹಗುರಾಯಿತು ಬದುಕು ಜೇನಾಯಿತು
ನಿನ್ನ ವಚನ ಹೊಸಬಾಳಿಗೆ ನಾಂದಿಯಾಯಿತು || ಪ ||
ದೂರ ಬೆಟ್ಟದಲ್ಲಿ ಪುಟ್ಟ ಮನೆಯಿರಬೇಕು
ಮನೆಯ ಸುತ್ತ ಹೂವ ರಾಶಿ ಹಾಸಿರಬೇಕು
ತಂಗಾಳಿ ಜೋಗುಳವ ಹಾಡಲು ಬೇಕು
ಬಂಗಾರದ ಹೂವೆ ನೀನು ನಗುತಿರಬೇಕು
ನನ್ನ ಜೊತೆಗಿರಬೇಕು || 1 ||
ನನ್ನ ಬಾಳ ನಗುವ ನಿನ್ನ ಮುಖದಿ ಕಾಣುವೆ
ಹರುಷದಲ್ಲಿ ದುಃಖದಲ್ಲಿ ನಿನ್ನ ನೆರಳಾಗಿರುವೆ
ಎಲ್ಲಿ ಹೋದರಲ್ಲಿ ನಿನ್ನ ನೆರಳಾಗಿರುವೆ
ಬಳ್ಳಿ ಮರವ ಹಬ್ಬಿದಂತೆ ನಿನ್ನೊಡನಿರುವೆ
ಬಯಕೆ ಪೂರೈಸುವೆ || 1 ||
ಬಂಗಾರದ ಹೂವು
ಚಿತ್ರ ನೋಡಿ